BIG NEWS ಕೇರಳ; ಯುವ ವೈದ್ಯೆಯನ್ನು ಚಿಕಿತ್ಸೆ ನೀಡುತ್ತಿದ್ದ ವೇಳೆ ಇರಿದು ಕೊಲೆ ಮಾಡಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆತಂದ ಆರೋಪಿ, ಬೆಚ್ಚಿಬೀಳಿಸಿದ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ಗೊತ್ತಾ?

ಕೊಲ್ಲಂ:ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಹಿಳಾ ವೈದ್ಯೆಯೊಬ್ಬರನ್ನು ಶಾಲಾ ಶಿಕ್ಷಕರೊಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಕೊಟ್ಟಾಯಂನ ಕಡುತುರುತಿಯ 25 ವರ್ಷದ ವಂದನಾ ದಾಸ್ ಮೃತರು.ಅವರು ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದರು.

ಹಲ್ಲೆ ಕೇಸ್ ಗೆ ಸಂಬಂಧಿಸಿ ನಿನ್ನೆ ಬಂಧಿತ ಆರೋಪಿ ಸಂದೀಪ್ ಗೆ ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ದರು.ಈ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ
ಕೊಲ್ಲಂನ ಸರ್ಕಾರಿ ಆಸ್ಪತ್ರೆಯ ವೈದ್ಯೆ ವಂದನಾಗೆ ಆರೋಪಿ ಶಿಕ್ಷಕ ಇರಿದು ಕೊಲೆ ಮಾಡಿದ್ದಾನೆ.

ಕೊಟ್ಟಾರಕ್ಕರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಂದನಾ ದಾಸ್ (23) ಎಂಬ ವೈದ್ಯೆಯ ಎದೆ ಮತ್ತು ಕತ್ತಿನ ಮೇಲೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಗಂಭೀರ ಗಾಯಗೊಂಡ ವಂದನಾ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಸಾವಿಗೀಡಾಗಿದ್ದಾರೆ.

42ರ ಹರೆಯದ ಆರೋಪಿ ಎಸ್ ಸಂದೀಪ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ. ಈತ ಪೊಲೀಸರು ಸೇರಿದಂತೆ ಆಸ್ಪತ್ರೆಯಲ್ಲಿ ಇತರ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾನೆ.

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಸಂದೀಪ್ ಸಿಟ್ಟುಗೊಂಡು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆತನ ಮನೆಯವರ ದೂರಿನ ಮೇರೆಗೆ ಆತನನ್ನು ಆತನ ಮನೆಯಿಂದ ಬಂಧಿಸಲಾಗಿತ್ತು.

ಸಂದೀಪ್ ಕಾಲಿಗೆ ಸಣ್ಣ ಗಾಯವಾಗಿದ್ದರಿಂದ, ಪೊಲೀಸ್ ತಂಡವು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು.ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಈ ಕತ್ತರಿಯಿಂದ ಆತ ವೈದ್ಯೆ ವಂದನಾಳ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೇ ಇರಿದಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.

ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ರಾಜ್ಯದ ಸರ್ಕಾರಿ ವೈದ್ಯರ ಸಂಘಟನೆಯು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದೆ.KGMOA ಕೊಲ್ಲಂ ಜಿಲ್ಲೆಯಲ್ಲಿ ಮುಷ್ಕರವನ್ನು ಘೋಷಿಸಿದೆ.

ಆಸ್ಪತ್ರೆಯಲ್ಲಿ ಆರೋಪಿ ಡ್ರೆಸ್ಸಿಂಗ್ ರೂಂನಲ್ಲಿದ್ದ ಕತ್ತರಿ ತೆಗೆದುಕೊಂಡು ತನ್ನೊಂದಿಗೆ ಬಂದಿದ್ದ ಸಂಬಂಧಿ ಬಿನು ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಹೊತ್ತಲ್ಲಿ ಎಲ್ಲರೂ ಓಡಿ ಹೋದರು. ಡ್ರೆಸ್ಸಿಂಗ್ ರೂಂನಲ್ಲಿ ವೈದ್ಯೆ ಮಾತ್ರ ಬಾಕಿಯಾಗಿದ್ದರು. ಆಗ ಸಂದೀಪ್, ವೈದ್ಯೆಯ ಕುತ್ತಿಗೆ, ಹೊಟ್ಟೆಗೆ ಹಲವು ಹಾರಿ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com