ಕೇರಳ; ಖ್ಯಾತ ನಟಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ಮಲಯಾಳಂ ನಟಿ ರೆಂಜೂಷಾ ಮೆನನ್ ಅವರು ಸೋಮವಾರ ಬೆಳಗ್ಗೆ ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

35 ವರ್ಷದ ನಟಿ ರೆಂಜೂಷಾ ಮೆನನ್ ಅವರು ಪತಿ ಮನೋಜ್ ಅವರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಅದೇ ಪ್ಲ್ಯಾಟ್‌ನಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಾಥಮಿಕವಾಗಿ ಆತ್ಮಹತ್ಯೆಯಂತೆ ಕಂಡು ಬಂದರೂ, ಅಧಿಕಾರಿಗಳು ನಟಿಯ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೊಚ್ಚಿ ಮೂಲದ ನಟಿ ರೆಂಜೂಷಾ ಮೆನನ್ ಆರಂಭದಲ್ಲಿ ಟಿವಿ ಕಾರ್ಯಕ್ರಮದಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ  ಸಿಟಿ ಆಫ್ ಗಾಡ್, ಮೇರಿಕ್ಕುಂಡೋರು ಕುಂಜಾಡು, ಬಾಂಬೆ ಮಾರ್ಚ್, ಕಾರ್ಯಸ್ಥನ್‌, ಒನ್ ವೇ ಟಿಕೆಟ್, ಅತ್ಭುತ ದ್ವೀಪ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. 

ಇವರು ಹಲವು ಸೀರಿಯಲ್‌ಗಳಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದರು. ಇದಲ್ಲದೆ ಅವರು ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿಯಾಗಿದ್ದರು.

ಟಾಪ್ ನ್ಯೂಸ್