ಬೆಳಗಾವಿ;ಸಿಡಿಲು ಬಡಿದು ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ದಡೇರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕವಿತಾ ಸಿದ್ದಪ್ಪ ಕರಿಕಟ್ಟಿ (23) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.ಕವಿತಾ ಕೃಷಿ ಕೆಲಸಕ್ಕೆಂದು ಜಮೀನಿಗೆ ತೆರಳಿದ್ದರು.
ಕೆಲಸ ಮುಗಿಸಿ ಮನೆಗೆ ವಾಪಸ್ ತೆರಳುವ ವೇಳೆ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಆರಂಭವಾಗಿದ್ದು,ಸಿಡಿಲು ಬಡಿದು ಯುವತಿ ಸಾವನ್ನಪ್ಪಿದ್ದಾರೆ.ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.