ಕಾಪು:ಸ್ಕೂಟರ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಯುವತಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ನಡೆದಿದೆ.
ರೋಶನಿ ಡಿಸೋಜಾ ಮೃತ ಯುವತಿ.ಉಡುಪಿಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸ್ಕೂಟರ್ ನಲ್ಲಿದ್ದ ರೋಶನಿಯ ಕಾಲಿಗೆ ಉಡುಪಿ ಕಡೆಯಿಂದ ಬಂದ ಬಸ್ಸು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಳಿಕ ಸ್ಕೂಟರ್ ನಿಯಂತ್ರಣ ಕಳೆದು ಮುಂಬದಿಯಲ್ಲಿ ಬ್ಯಾರಿಕ್ಯಾಡ್ ಗೆ ಢಿಕ್ಕಿ ಹೊಡೆದು ಸ್ಕೂಟರ್ ನಿಂದ ರೋಶನಿ ಬಿದ್ದು ರಕ್ತಸ್ರಾವದೊಂದಿಗೆ ಗಂಭೀರವಾಗಿ ಗಾಯಗೊಂಡಿದ್ದರು.ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.
ಈ ಕುರಿತು ಸ್ಕೂಟರ್ ಸವಾರ ಕಾಪು ಠಾಣೆಗೆ ದೂರು ನೀಡಿದ್ದಾರೆ.