ಕಾಸರಗೋಡು; 56 ವರ್ಷದ ಆರೋಪಿಗೆ 62 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ; ಏನಿದು ಪ್ರಕರಣ?

ಕಾಸರಗೋಡು; 56 ವರ್ಷದ ಆರೋಪಿಗೆ 62 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ;ಏನಿದು ಪ್ರಕರಣ?

ಕಾಸರಗೋಡು;ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗೆ 62 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕುಂಬಳೆ ಬಂಬ್ರಾಣದ ಕೆ.ಚಂದ್ರಶೇಖರ (56) ಶಿಕ್ಷೆ ಗೊಳಗಾದ ಆರೋಪಿ.ಕಾಸರಗೋಡು ಮತ್ತು ಕುಂಬಳೆ ಠಾಣಾ ಪೊಲೀಸರು ದಾಖಲಿಸಿದ ಎರಡು ಪ್ರತ್ಯೇಕ ಫೋಕ್ಸೋ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಈ ಶಿಕ್ಷೆ ವಿಧಿಸಲಾಗಿದೆ

ಕಾಸರಗೋಡು ಹಾಗೂ ಕುಂಬಳೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲಾ 31 ವರ್ಷ ಶಿಕ್ಷೆ ವಿಧಿಸಲಾಗಿದೆ.ಇದರ ಜೊತೆಗೆ ಆರೋಪಿಗೆ ಒಂದು ಲಕ್ಷ ರೂ.ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಾಸರಗೋಡು ಪಾಸ್ಟ್ ಟ್ರಾಕ್ ವಿಶೇಷ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿ ತೀರ್ಫು ನೀಡಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com