ಕಾಸರಗೋಡು: ಮೊಬೈಲ್ ಹೆಚ್ಚು ಬಳಸಬೇಡ ಎಂದ ತಾಯಿಗೆ ಕೊಲೆ ಮಾಡಿದ ಮಗ; ಆಘಾತಕಾರಿ ಘಟನೆ ವರದಿ

ಕಾಸರಗೋಡು:ಹೆತ್ತ ತಾಯಿಯನ್ನೇ ದುಷ್ಕರ್ಮಿಯೋರ್ವ
ಮರದ ಹಲಗೆಯಿಂದ ಬಡಿದು ಕೊಲೆಗೈದ ಘಟನೆ ನೀಲೇಶ್ವರ ದಲ್ಲಿ ನಡೆದಿದೆ.

ನೀಲೇಶ್ವರ ಕಣಿಚ್ಚರದ ರುಕ್ಮಿಣಿ (63) ಕೊಲೆಯಾದವರು.

ಆರೋಪಿ ಪುತ್ರ ಸುಜಿತ್(34)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಫೋನ್ ಹೆಚ್ಚು ಬಳಕೆ ಮಾಡಬೇಡ ಎಂದು ತಾಯಿ ಹೇಳಿದಾಗ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಕೊನೆಗೊಂಡಿದೆ.

ಹಲಗೆಯಿಂದ ತಲೆಗೆ ಬಡಿದ ಪರಿಣಾಮ ರುಕ್ಮಿಣಿ ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದು, ವೈದ್ಯರು ಈತನಿಗೆ ಮಾನಸಿಕ ಸಮಸ್ಯೆ ಇರುವುದಾಗಿ ವರದಿ ನೀಡಿದ್ದಾರೆ.

ಟಾಪ್ ನ್ಯೂಸ್