ಕಾಸರಗೋಡು ಅಂಜುಶ್ರೀ ಸಾವಿನ ಕೇಸ್ ಗೆ ಟ್ವಿಸ್ಟ್,‌ ಕೋರ್ಟ್ ಗೆ ಆಕೆ ಬರೆದಿದ್ದೆನ್ನಲಾದ ಡೆತ್ ನೋಟು ಸಲ್ಲಿಸಿದ ಪೊಲೀಸರು

ಕಾಸರಗೋಡು;ಹೊಟೇಲ್ ವೊಂದರಿಂದ ಬಿರಿಯಾನಿ ತರಿಸಿ ತಿಂದಿದ್ದ ಬಾಲಕಿಯ‌ ಸಾವಿಗೆ ಸಂಬಂಧಿಸಿ ದಿನಕ್ಕೊಂದು ತಿರುವು ಪಡೆದುಕೊಂಡಿದೆ.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಪೆರುಂಬಳ ಬೇನೂರು ನಿವಾಸಿ ಅಂಜುಶ್ರೀ ಪಾರ್ವತಿ (19) ಸಾವಿಗೆ ಸಂಬಂಧಿಸಿ ಆಕೆಯದ್ದೆನ್ನಲಾದ
ಡೆತ್ ನೋಟನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.

ಮೇಲ್ಪರಂಬ ಪೊಲೀಸರು ಕಾಸರಗೋಡು ಸಬ್‌ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಮಾನಸಿಕ ತಳಮಳದಿಂದ ಜೀವನ ಕೊನೆಗೊಳಿಸುತ್ತಿದ್ದೇನೆ ಎಂದು ಒಂದು ಸಾಲಿನ ಬರಹವನ್ನು ಬರೆಯಲಾಗಿದೆ ಎನ್ನಲಾಗಿದೆ.

ಇನ್ನು ರಾಸಾಯನಿಕ ಪರೀಕ್ಷೆಗಾಗಿ ಕಲ್ಲಿ ಕೋಟೆಯ ಲ್ಯಾಬ್‌ ಗೆ ಕಳುಹಿಸಿರುವ ಸ್ಯಾಂಪಲ್‌ ಗ‌ಳ ಪರೀಕ್ಷಾ ವರದಿ ಬರಬೇಕಿದೆ ಎಂದು ತಿಳಿದು‌ ಬಂದಿದೆ.

ಟಾಪ್ ನ್ಯೂಸ್