ಕಾಸರಗೋಡು:ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ
ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ.
ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.
ಶನಿವಾರ ರಾತ್ರಿ ಎನ್ನಪ್ಪರದಲ್ಲಿ ಯುವಕರು ಜೂಜಾಟವನ್ನು ಆಡುತ್ತಿದ್ದರು.ಈ ವೇಳೆ ವಿಷ್ಣು ಅವರು ಕೂಡ ಜೊತೆಗಿದ್ದರು. ಈ ವೇಳೆ ದಿಡೀರ್ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದಾರೆ.
ಪೊಲೀಸರ ಏಕಾಏಕಿ ದಾಳಿಗೆ ಎಲ್ಲರೂ ಅಡ್ಡಾದಿಡ್ಡಿ ಓಡಿದ್ದಾರೆ.ಈ ವೇಳೆ ಓಡಿದ ವಿಷ್ಣು ಕತ್ತಲಿನಲ್ಲಿ ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.