ಕಾಸರಗೋಡು: ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮಂಜೇಶ್ವರ ಮಜಿ ಬೈಲ್ ನ ಖಾದರ್ ರವರ ಮಕ್ಕಳಾದ ನಾಸಿಮ್ (22) ಮತ್ತು ನಾದಿಲ್ (17) ಮೃತಪಟ್ಟವರು.
ಸ್ಥಳೀಯ ನಿವಾಸಿಗಳು ನೀರಿನಲ್ಲಿ ಸಹೋದರರು ಮುಳುಗುವುದನ್ನು ಕಂಡು ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿ ಅಸ್ಪತೆಗೆ ಸಾಗಿಸಿದರು.ಆದರೆ ಜೀವ ಉಳಿಸಲಾಗಳಿಲ್ಲ.
ಮೃತ ದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.