ಮುಹಮ್ಮದ್ ಫರ್ ಹಾಜ್ ಮೃತಪಟ್ಟ ವಿದ್ಯಾರ್ಥಿ.
ಕಾಸರಗೋಡು: ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಕುಂಬಳೆ ಪೇರಾಲ್ ಕಣ್ಣೂರಿನ ಮುಹಮ್ಮದ್ ಫರ್ ಹಾಜ್ (17) ಮೃತಪಟ್ಟ ವಿದ್ಯಾರ್ಥಿ.
ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಬರುವಾಗ ಫರ್ ಹಾಜ್ ಹಾಗೂ ಮೂವರು ಸಹಪಾಠಿಗಳು ಸಂಚರಿಸುತ್ತಿದ್ದ ಕಾರು ಈ ಅಪಘಾತಕ್ಕೀಡಾಗಿತ್ತು.ಖತೀಬ್ ನಗರದಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದು, ಕಳತ್ತೂರು ಪಳ್ಳ ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಘಟನೆಯಲ್ಲಿ ಫರ್ ಜಾಜ್ ಹಾಗೂ ಸಹಪಾಠಿಗಳು ಗಾಯಗೊಂಡಿದ್ದರು.ಈ ಪೈಕಿ ಫರ್ ಹಾಜ್ ಗಂಭೀರ ಗಾಯಗೊಂಡಿದ್ದನು.ಫರ್ ಹಾಜ್ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ.ಅವರನ್ಜು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಫರ್ ಹಾಜ್ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಉಳಿದ ಮೂವರು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.