ಕಾಸರಗೋಡಿನಲ್ಲಿ ಬೀಡಿ ಕೆಲಸ ಮಾಡುತ್ತಿದ್ದ ಯುವಕ ಈಗ ಅಮೆರಿಕಾದ ಕೋರ್ಟ್ ನಲ್ಲಿ ಜಡ್ಜ್

ಕಾಸರಗೋಡು ಮೂಲದ ಸುರೇಂದ್ರನ್ ಕೆ.ಪಟೇಲ್ ಅಮೆರಿಕಾದ 240ನೇ ಡಿಸ್ಟ್ರಿಕ್ಟ್​​ ಕೋರ್ಟ್​​ ಜಡ್ಜ್​​ ಆಗಿ
ಆಯ್ಕೆಯಾಗಿದ್ದಾರೆ.

ಸುರೇಂದ್ರನ್​​ ಅವರು ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ.

ಕಾಸರಗೋಡಿನ ಬಳಾಲ್​​ ಎಂಬಲ್ಲಿ ಜನಸಿದ ಸುರೇಂದ್ರನ್ ವಕೀಲರಾಗುವ ಮುನ್ನ ಬೀಡಿ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಬಳಿಕ ಎಲ್ ಎಲ್ ಬಿ ಪದವಿ ಮುಗಿಸಿ​ ಕರ್ನಾಕದಲ್ಲೇ ಸುಮಾರು 10 ವರ್ಷಗಳ ವಕೀಲರಾಗಿ ಸೇವೆ ಸಲ್ಲಿಸಿದ್ದರು.​​

ಕಾಸರಗೋಡು ಮೂಲದ ಮಹಿಳೆಯೊಬ್ಬರು ದೆಹಲಿಯಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ವಿವಾಹವಾದ ಬಳಿಕ ಸುರೇಂದ್ರನ್​​, ಸುಪ್ರೀಂಕೋರ್ಟ್​​ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.

ಬಳಿಕ ಪತ್ನಿ ಜೊತೆ ಅಮೆರಿಕಾಗೆ ತೆರಳಿದ ಸುರೇಂದ್ರನ್​​, ಅಲ್ಲಿನ ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಈಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ‌.

ಟಾಪ್ ನ್ಯೂಸ್