ಕಾಸರಗೋಡು: ತಾಯಿಯೋರ್ವಳಯ ಒಂದೂವರೆ ತಿಂಗಳ ಹೆಣ್ಣು ಮಗುವನ್ನು ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳ ಪಚ್ಲಂಪಾರೆಯಲ್ಲಿ ನಡೆದಿದೆ.
ಸುಮಂಗಲಿ-ಸತ್ಯನಾರಾಯಣ ದಂಪತಿಯ ಒಂದೂವರೆ ತಿಂಗಳ ಮಗು ಮೃತಪಟ್ಟಿದೆ.
ಮಂಗಳವಾರ ತಾಯಿ ಮತ್ತು ಮಗು ನಾಪತ್ತೆಯಾದುದರಿಂದ ಮನೆಯವರು ಶೋಧ ನಡೆಸಿದಾಗ ತಾಯಿಯನ್ನು ಮನೆಯ ಅಲ್ಪ ದೂರದಿಂದ ಪತ್ತೆ ಹಚ್ಚಲಾಗಿದ್ದು ಮಗು ನಾಪತ್ತೆಯಾಗಿತ್ತು.
ಈ ಬಗ್ಗೆ ವಿಚಾರಿಸಿದಾಗ ಮಗುವನ್ನು ಸಮೀಪದ ಬಯಲಿನಲ್ಲಿ ಕೆಸರು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದರು.
ಕೂಡಲೇ ಮಗುವನ್ನು ಮೇಲಕ್ಕೆತ್ತಿ ಉಪ್ಪಳದ ಮಂಗಲ್ಪಾಡಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿತ್ತು.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.