ಕಾಸರಗೋಡು;ಮಸೀದಿ ಕಟ್ಟಡ ತೆರವು ವೇಳೆ ಅವಘಡ, ತಪ್ಪಿದ ಭಾರೀ ದುರಂತ

ಕಾಸರಗೋಡು:ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ವೇಳೆ ಮುಂಭಾಗ ಕುಸಿದು ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮುರಿಬಿದ್ದಿದ್ದು, ಅದೃಷ್ಟವಶಾತ್ ಈ ವೇಳೆ ಸಂಭವಿಸಬಹುದಾದ ಭಾರೀ ಅವಘಡವೊಂದು ತಪ್ಪಿದೆ.

ನುಳ್ಳಿಪ್ಪಾಡಿಯಲ್ಲಿ ಹೆದ್ದಾರಿ ಕಾಮಗಾರಿ ಹಿನ್ನೆಲೆ ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ಗೊಳಿಸುತ್ತಿದ್ದಾಗ ಏಕಾಏಕಿ ಮಸೀದಿ ಕಟ್ಟಡದ ಭಾಗಗಳು ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ.

ಈ ವೇಳೆ ರಸ್ತೆಯಲ್ಲಿನ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಈ ಸಂದರ್ಭದಲ್ಲಿ ಹಲವಾರು ವಾಹನ ಗಳು ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವು.ಇದಲ್ಲದೆ ನೂರಾರು ಮಂದಿ ತೆರವು ಕಾರ್ಯ ನೋಡಲು ಸೇರಿದ್ದು, ಭಾರೀ ದುರಂತ ತಪ್ಪಿದೆ.

ಟಾಪ್ ನ್ಯೂಸ್