ಕಾಸರಗೋಡು; ಲಾರಿಯಡಿಗೆ ಸಿಲುಕಿ ಚಾಲಕ ಮೃತ್ಯು, ಆಕಸ್ಮಿಕ ಘಟನೆ

ಕಾಸರಗೋಡು: ಲಾರಿಯಡಿಗೆ ಸಿಲುಕಿ ಚಾಲಕ ಮೃತ ಪಟ್ಟ ದಾರುಣ ಘಟನೆ ಇಂದು ಬದಿಯಡ್ಕ ಸಮೀಪದ ನೀರ್ಚಾಲ್ ಗೋಳಿಯಡ್ಕದಲ್ಲಿ ನಡೆದಿದೆ.

ಪಾಡಿ ಉತ್ತರತ್ತೋಡಿಯ ಮುಹಮ್ಮದ್ ನೌಫಲ್ (23) ಮೃತಪಟ್ಟ ಯುವಕ. ನೌಫಲ್ ಲಾರಿಯನ್ನು ಸ್ಟಾರ್ಟ್ನಲ್ಲಿರಿಸಿ ಗೇಟ್ ತೆರೆಯಲು ಹೋದ ಸಂದರ್ಭದಲ್ಲಿ ಅದೇ ಲಾರಿ ಮುಂದಕ್ಕೆ ಚಲಿಸಿದ ಕಾರಣ ಲಾರಿಯಡಿಗೆ ಸಿಲುಕಿ ಈ ದಾರುಣ ಘಟನೆ ನಡೆದಿದೆ.

ಕೂಡಲೇ ನೌಫಲ್ ಗೆ ಕುಂಬಳೆಯ ಆಸ್ಪತ್ರೆಗೆ ತಲಾಪಿಸಿದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್