ಕಾಸರಗೋಡು;ಪ್ರಚೋದನಾಕಾರಿ ಘೋಷಣೆ ಆರೋಪ, ನಾಲ್ವರ ಬಂಧನ, ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ನಿಗಾ

ಕಾಸರಗೋಡು:ಮಣಿಪುರ ಘಟನೆ ಖಂಡಿಸಿ ಮುಸ್ಲಿಂ ಯೂತ್ ಲೀಗ್ ಕಾಞ೦ಗಾಡ್ ನಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಪ್ರಚೋದನಾಕಾರಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.




ಬಂಧಿತರನ್ನು ಅಬ್ದುಲ್ ಸಲಾಂ (18), ಷರೀಫ್(38) ಪಿ .ಎಚ್ ಅಯೂಬ್ ( 45) ಮತ್ತು ಪಿ.ಮುಹಮ್ಮದ್ ಕುಂಞ(55) ಎಂದು ಗುರುತಿಸಲಾಗಿದೆ.

ಪ್ರಚೋದಕಾರಿ ಘೋಷಣೆ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ಇರಿಸಿದ್ದಾರೆ.ಫೇಸ್ ಬುಕ್, ವಾಟ್ಸ್ ಅಪ್, ಟೆಲಿಗ್ರಾಮ್, ಫೇಸ್ ಬುಕ್ ಸೇರಿದಂತೆ ಸಾಮಜಿಕ ಜಾಲ ತಾಣಗಳ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೆನಾ ಹೇಳಿದ್ದಾರೆ.

ಪ್ರಚೋದನಕಾರಿ ಸಂದೇಶ, ವರದಿಗಳು ಘೋಷಣೆ ಮೊದಲಾದವುಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಜಾಮೀನು ರಹಿತ ಮೊಕದ್ದಮೆ ಹೂಡಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.

ಘೋಷಣೆ ಕೂಗಿದ ಐವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದವರ ಬಂಧನಕ್ಕಾಗಿ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಮಣಿಪುರ ಘಟನೆಗೆ ಸಂಬಂಧಪಟ್ಟಂತೆ ಯೂತ್ ಲೀಗ್ ಕಾಞ೦ಗಾಡ್ ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗಿದ್ದಾರೆ.




ಟಾಪ್ ನ್ಯೂಸ್