ಕಾಸರಗೋಡು; ತಾಯಿಯ ಎದೆ ಹಾಲು ಕುಡಿಯುವಾಗ ಉಸಿರು ಗಟ್ಟಿ ಮಗು ಮೃತ್ಯು

ಕುಂಬಳೆ: ತಾಯಿಯ ಎದೆ ಹಾಲು ಕುಡಿಯುವಾಗ ಉಸಿರುಗಟ್ಟಿ ಮೂರು ತಿಂಗಳು ಪ್ರಾಯದ ಮಗು ಮೃತಪಟ್ಟ ಘಟನೆ ಬಂಬ್ರಾಣದಲ್ಲಿ ನಡೆದಿದೆ.

ಮೂಲತಃ ಈಶ್ವರ ಮಂಗಲ ನಿವಾಸಿ, ಪ್ರಸ್ತುತ ಬಂಬ್ರಾಣದಲ್ಲಿ ನೆಲೆಸಿದ್ದ ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ , ಮೂರು ತಿಂಗಳ ಮಗು ಅಯಿಶಾ ಮೆಹ್ರಾ ಮೃತಪಟ್ಟಿದೆ.

ಮಲಗಿಕೊಂಡು ಎದೆಹಾಲು ಕುಡಿಯುತ್ತಿದ್ದ ಮಗು ರಾತ್ರಿ ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಟಾಪ್ ನ್ಯೂಸ್