ಹೊಟೇಲ್‌ನಿಂದ ಚಿಕನ್​ ಬಿರಿಯಾನಿ ತರಿಸಿ ಸೇವಿಸಿದ್ದ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು

ಕಾಸರಗೋಡು; ಹೊಟೇಲ್‌ನಿಂದ ಆನ್​ಲೈನ್​ ಮೂಲಕ ಚಿಕನ್​ ಬಿರಿಯಾನಿ ತರಿಸಿ ಸೇವಿಸಿದ್ದ ಯುವತಿ ಫುಡ್​ ಪಾಯಿಸನ್‌ನಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ‌

ಅಂಜುಶ್ರೀ ಮೃತ ಯುವತಿ. ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಉದುಮದಲ್ಲಿರುವ ಹೋಟೆಲ್​ ಒಂದರಿಂದ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಸೇವಿಸಿದ್ದಳು.ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ಘಟನೆಯ ಬಗ್ಗೆ ತನಿಖೆಗೆ ಕೇರಳದ ಆರೋಗ್ಯ ಸಚಿವರು ಆದೇಶವನ್ನು ನೀಡಿದ್ದಾರೆ.

ಟಾಪ್ ನ್ಯೂಸ್