ಕಾಸರಗೋಡು; ಅಪಘಾತದಲ್ಲಿ ಯುವಕ ಮೃತ್ಯು

ಕಾಸರಗೋಡು: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಬೇಕಲ ಠಾಣಾ ವ್ಯಾಪ್ತಿಯ ಚೆಮ್ನಾಡ್ ಬಳಿ ನಡೆದಿದೆ.

ಚೆಮ್ನಾಡ್ ಕೋಳಿ ಯಡ್ಕದ ಸಫ್ರಜುಲ್ ಅಮಾನ್ (20) ಮೃತಪಟ್ಟವರು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅಮಾನ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈತ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದನು.

ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ

ಟಾಪ್ ನ್ಯೂಸ್