ಕಾಸರಗೋಡು; ಸ್ಕೂಟರ್ ಅಪಘಾತದಲ್ಲಿ ಶಾಲಾ ಬಾಲಕನೊಬ್ಬ ಮೃತಪಟ್ಟ ಘಟನೆ ಪೈವಳಿಕೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ಬಾಲಕನನ್ನು ಪೈವಳಿಕೆ ಲಾಲ್ ಬಾಗ್ ನಿವಾಸಿ ಇಬ್ರಾಹಿಂ ಮೊಯ್ದಿನ್ ರವರ ಪುತ್ರ ಇಫ್ರಾಝ್ ಎಂದು ಗುರುತಿಸಲಾಗಿದೆ.
ಇಫ್ರಾಝ್ ಉಪ್ಪಳ ತಹಾನಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಗೆಳೆಯನ ಜೊತೆ ಮಸೀದಿಯಿಂದ ತೆರಳುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಮನೆ ಸಮೀಪ ಈ ಅಪಘಾತ ನಡೆದಿದೆ.
ಸ್ಕೂಟರ್ ನ ಮುಂದಿನಿಂದ ತೆರಳುತ್ತಿದ್ದ ಜೀಪು ತಿರುವು ರಸ್ತೆ ಯಲ್ಲಿ ದಿಡೀರ್ ಬ್ರೇಕ್ ಹಾಕಿದಾಗ ಈ ಅಪಘಾತ ನಡೆದಿದ್ದು, ಹಿಂಬದಿ ಕುಳಿತಿದ್ದ ಇಫ್ರಾಝ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.