ಕಾಸರಗೋಡು; ಧಪನ ಮಾಡಿದ ಖಬರಸ್ತಾನದಿಂದ ವ್ಯಕ್ತಿಯೋರ್ವರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಕಾಸರಗೋಡು;ಸಾವಿನ‌ ಬಗ್ಗೆ ಅನುಮಾನದ ಹಿನ್ನೆಲೆ‌ ಅನಿವಾಸಿ ಉದ್ಯಮಿಯೋರ್ವರ ಮೃತದೇಹವನ್ನು ಧಪನ ಮಾಡಿದ ಖಬರಸ್ತಾನದಿಂದ ತೆಗೆದು ವಾಪಾಸ್ಸು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಪೂಚಕ್ಕಾಡ್ ನಿವಾಸಿ ಉದ್ಯಮಿ ಅಬ್ದುಲ್ ಗಪೂರ್ ಸಾವಿನಲ್ಲಿ ಅನುಮಾನ ಕಂಡು ಬಂದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.

ಏ.13ರಂದು ಗಪೂರ್ ನಿಧನರಾಗಿದ್ದರು.ಅವರ ಅಂತ್ಯ ಸಂಸ್ಕಾರ ಏ.14ರಂದು ನಡೆದಿತ್ತು. ಅವರು ನಿಧನದ ದಿನ ಮನೆಯಲ್ಲಿ ಒಬ್ಬರೆ ಇದ್ದರು. ಇದೀಗ ಸಾವಿನಲ್ಲಿ ಅನುಮಾನ ಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಪೂಚಕ್ಕಾಡ್ ಹೈದ್ರೋಸ್ ಮಸೀದಿಯ ದಫನ‌ ಭೂಮಿಯಿಂದ ಹೊರ ತೆಗೆಯಲಾಗಿದೆ.

ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಮೃತದೇಹ ಹೊರತೆಗೆದು ಪರೀಕ್ಷೆ ಕಾರ್ಯ ನಡೆದಿದೆ.

ಆರಂಭದಲ್ಲಿ ಗಪೂರು ಅವರದ್ದು ಸಹಜ ಸಾವು ಎಂದು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.ಆ ಬಳಿಕ ಅವರ ಮನೆಯಲ್ಲಿ 600 ಪವನ್ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.‌‌ನಾಪತ್ತೆಯಾದ ಚಿನ್ನಾಭರಣದ ಮೌಲ್ಯ ಬರೊಬ್ಬರಿ 2.85 ಕೋಟಿ ಎಂದು ಹೇಳಲಾಗಿದೆ.

ಇದೀಗ ಮರಣೋತ್ತರ ಪರೀಕ್ಷೆ ನಡೆದಿದ್ದು ಅಂತಿಮ ವರದಿಯ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬರಲು ಎರಡು ವಾರಗಳ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ.ಫಾರೆನ್ಸಿಕ್ ಸರ್ಜನ್ ಡಾ.ಸರಿತಾ ನೇತೃತ್ವದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com