ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕಾಸರಗೋಡಿನಲ್ಲಿ ಬಂಧನ; ಕರಾವಳಿಯ ಠಾಣೆಗಳಲ್ಲೂ ಇವರ ಮೇಲಿದೆ ಪ್ರಕರಣ!

ಕಾಸರಗೋಡು;ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ರಿವಾಲ್ವರ್ ಸಹಿತ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೀಯಪದವಿನ ಅಬ್ದುಲ್ ರಹೀಮ್(36) ಮತ್ತು ಬಂದ್ಯೋಡು ಅಡ್ಕದ ಅಬ್ದುಲ್ ಲತೀಫ್ (32) ಬಂಧಿತರು.

ಅಬ್ದುಲ್ ಲತೀಫ್ ನನ್ನು ಕೋಜಿಕ್ಕೋಡ್ ನ ವಸತಿಗೃಹದಿಂದ ಬಂಧಿಸಲಾಗಿದ್ದು, ಈತ ನೀಡಿದ ಮಾಹಿತಿಯಂತೆ ಅಬ್ದುಲ್ ರಹೀಮ್ ನನ್ನು ಬಂಧಿಸಲಾಗಿದೆ.ಈತನ ಬಳಿಯಿಂದ ರಿವಾಲ್ವರ್, ಸಜೀವ ಗುಂಡು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಹೀಮ್ ವಿರುದ್ಧ ಸುಳ್ಯ,ಪುತ್ತೂರು,ವಿಟ್ಲ,ಮಂಜೇಶ್ವರ ಪೊಲೀಸ್ ಠಾಣೆ ಗಳಲ್ಲಿ ಹದಿನೈದಕ್ಕೂ ಅಧಿಕ ಪ್ರಕರಣಗಳು ಐದು ವಾರಂಟ್ ಗಳು ಜಾರಿಯಲ್ಲಿರುವುದಾಗಿ ತಿಳಿದು ಬಂದಿದೆ.

ಬಂಧಿತರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೊಲೀಸರಿಂದ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ‌.ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್