ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ, ಗುರುತು ಸಿಗದಂತೆ ಆಸಿಡ್ ಎರಚಿ ಕ್ರೌರ್ಯ

ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆ, ಗುರುತು ಸಿಗದಂತೆ ಆಸಿಡ್ ಎರಚಿ ಕ್ರೌರ್ಯ

ರಾಜಸ್ಥಾನ:ಕರೌಲಿಯಲ್ಲಿ ದಲಿತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ಗುರುತು ಮರೆಮಾಚಲು ಆಕೆಯ ಮುಖವನ್ನು ಆಸಿಡ್ ನಿಂದ ಸುಟ್ಟು ಹಾಕಿ ಬಾವಿಗೆ ಎಸೆದಿರುವ ಬಗ್ಗೆ ವರದಿಯಾಗಿದೆ.

ನಡೌಟಿ ಉಪವಿಭಾಗದ ತೋಡಭೀಮ್ನ ಮೋಹನಪುರದಲ್ಲಿ ಈ ಘಟನೆ ನಡೆದಿದೆ. ಗುರುವಾರ ಇಲ್ಲಿನ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹದ ಗುರುತು ಮರೆಮಾಚಲು ಆಸಿಡ್ ಹಾಕಿ ಸುಟ್ಟು ಹಾಕಲಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಯ ನಂತರ ನಡೌಟಿ ಪೊಲೀಸ್ ಠಾಣೆ ಪ್ರಭಾರಿ ಬಾಬುಲಾಲ್ ಅವರು ಈ ದಲಿತ ಬಾಲಕಿ ತೊಡಭೀಮ್ ಪ್ರದೇಶದ ಮೋಹನಪುರ ನಿವಾಸಿ ಎಂದು ಹೇಳಿದ್ದಾರೆ. ಬುಧವಾರ ಆಕೆ ನಾಪತ್ತೆಯಾಗಿದ್ದಳು.ಗುರುವಾರ ಅವರ ಶವವನ್ನು ಬಾವಿಯಿಂದ ಹೊರತೆಗೆಯಲಾಯಿತು.ಬಾಲಕಿಯನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್