SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು;ಕರ್ನಾಟಕದಲ್ಲಿನ 2023ರ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಏಪ್ರಿಲ್ 4 ರಂದು ಮಹಾವೀರ ಜಯಂತಿ ರಜೆ ಇರುವ ಕಾರಣ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

2023ರ ಎಸ್ ಎಸ್ ಎಲ್ ಸಿ ಮುಖ್ಯಪರೀಕ್ಷೆ ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಯಲಿದೆ.

ಮಾರ್ಚ್ 31- ಪ್ರಥಮ ಭಾಷೆ,ಏಪ್ರಿಲ್ 3- ಗಣಿತ, ಏಪ್ರಿಲ್ 6- ದ್ವಿತೀಯ ಭಾಷೆ, ಏಪ್ರಿಲ್ 10- ವಿಜ್ಞಾನ,
ಏಪ್ರಿಲ್ 12- ತೃತೀಯ ಭಾಷೆ,ಏಪ್ರಿಲ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

ಟಾಪ್ ನ್ಯೂಸ್