ಬೆಂಗಳೂರು;ರಾಜ್ಯದ ಜನತೆಗೆ ಮತ್ತೆ ಶಾಕಿಂಗ್ ಸುದ್ದಿ ಇದಾಗಿದ್ದು,ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿದೆ ಎನ್ನಲಾಗಿದೆ.
ಎಸ್ಕಾಮ್ ಗಳು ಪ್ರತಿ ಯುನಿಟ್ ಗೆ 1.50 ರಿಂದ 2 ರೂ. ತನಕ ವಿದ್ಯುತ್ ದರ ಏರಿಕೆ ಕೋರಿ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಫೆ.13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ತನ್ನ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.