ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಗಳನ್ನು ಮಾಡುತ್ತಿದೆ.
ಕೇಸರಿ ಪಾಳಯ ಹಿಂದುತ್ವದ ಅಸ್ತ್ರ ಬಳಸಿ ಪ್ರಚಾರ ಮಾಡುತ್ತಿದ್ದು, ಎಸ್ಸಿ, ಎಸ್ಟಿ ದಲಿತರ ಓಲೈಕೆಗೂ ಮುಂದಾಗಿದೆ.ಆದರೆ ಫಲಿತಾಂಶ ಈ ಬಾರಿ ಹೇಗೆ ಬರಬಹುದೆಂದು ಆತಂಕವೂ ಕೇಸರಿ ಪಾಳಯದಲ್ಲಿದೆ. ಇದರಿಂದ ಎರಡು ಆಂತರಿಕ ಸಮೀಕ್ಷೆಯನ್ನು ನಡೆಸಿದೆ ಎಂದು ವರದಿಯಾಗಿದೆ.
ರಾಜ ಬಿಜೆಪಿ ಘಟಕದಿಂದ ಒಂದು ಆಂತರಿಕ ಸರ್ವೆಯಾಗಿದ್ದು,ಬಿಜೆಪಿ ಹೈಕಮಾಂಡ್ನಿಂದ ಮತ್ತೊಂದು ಆಂತರಿಕ ಸರ್ವೆ ಮಾಡಿದೆ ಎಂದು Tv 9 ವರದಿ ಮಾಡಿದೆ.
ಮೊದಲ ಸರ್ವೆಯಲ್ಲಿ ಬಿಜೆಪಿಗೆ 80 ರಿಂದ 85 ಸ್ಥಾನಗಳು ಲಭಿಸಿವೆ.ಇನ್ನು 2ನೇ ಸರ್ವೆ ಮಾಡಿಸಿದ ಬಿಜೆಪಿಗೆ, 90 ರಿಂದ 98 ಸ್ಥಾನಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಯಾವುದೇ ಸರ್ವೆಯಲ್ಲಿ ಬಿಜೆಪಿಯ ಅಂಕಿ ಅಂಶ 100 ದಾಟಿಲ್ಲ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಇನ್ನು ಕಾಂಗ್ರೆಸ್ ಕೂಡ ಆಂತರಿಕ ಸರ್ವೆ ನಡೆಸಿದೆ. ಕೆಟಗೆರಿ ಪ್ರಕಾರ ಸರ್ವೆ ಮಾಡಿಸಿರುವ ಕಾಂಗ್ರೆಸ್, ಎ,ಬಿ,ಸಿ ಅಂತಾ ಮೂರು ಕೆಟಗೆರಿಗಳನ್ನು ಮಾಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಗೆ ಒಂದು ಸರ್ವೆಯಲ್ಲಿ 98 ಸ್ಥಾನ, ಮತ್ತೊಂದು ಸರ್ವೆಯಲ್ಲಿ 106 ಸೀಟ್ಗಳು ಬಂದಿವೆ ಎನ್ನಲಾಗಿದೆ. ಎ ಕೆಟಗೆರಿ ಮೇಲೆ ಗೆಲ್ಲಬಲ್ಲ 55 ಅಭ್ಯರ್ಥಿಗಳನ್ನು ಗುರುತಿಸಿದ್ದು, ಸರ್ವೆಯಲ್ಲಿ 55 ಮಂದಿ ಗೆಲುವಿನ ಬಗ್ಗೆ ಮಾಹಿತಿ ಕಲೆಹಾಕಿದೆ. ಅಂದಹಾಗೆ ಗೆಲ್ಲುವ ಎ ಕೆಟಗೆರಿಯ 55 ಅಭ್ಯರ್ಥಿಗಳು, ಬಿ ಕ್ಯಾಟಗರಿಯ 80 ಕ್ಷೇತ್ರಗಳನ್ನು ಆಧರಿಸಿ, 135 ಸ್ಥಾನಗಳನ್ನು ಟಾರ್ಗೆಟ್ ಕಾಂಗ್ರೆಸ್ ಇಟ್ಟುಕೊಂಡಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆ ಶೀಘ್ರವೇ ನಡೆಯಲಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವ ರೀತಿ ಮತದಾರ ವಿಶ್ವಾಸವನ್ನು ಗೆಲ್ಲಲಿದೆ ಎನ್ನುವುದು ಫಲಿತಾಂಶದ ಬಳಿಕವೇ ತಿಳಿದು ಬರಲಿದೆ.