ಕಾರ್ಕಳ; ಟಿಪ್ಪರ್ ನಿಧಾನವಾಗಿ ಚಲಾಯಿಸು ಎಂದು ಬುದ್ದಿವಾದ ಹೇಳಿದ್ದ ವ್ಯಕ್ತಿಯನ್ನು ಟಿಪ್ಪರ್ ಚಲಾಯಿಸಿ ಕೊಲೆ, ಮಸೀದಿಯಿಂದ ಹಿಂತಿರುಗುವಾಗ ನಡೆದ ಶಾಕಿಂಗ್ ಘಟನೆ!

ಮೂಡುಬಿದಿರೆ:ಟಿಪ್ಪರ್ ನಿಧಾನವಾಗಿ ಚಲಾಯಿಸು ಎಂದು ಬುದ್ದಿವಾದ ಹೇಳಿದ್ದಕ್ಕೆ ವಯಸ್ಕ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿರುವ ಭಯಾನಕ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌.

ಕೋಟೆಬಾಗಿಲಿನ ನಿವಾಸಿ ಫಯಾಝ್ (61)ಕೊಲೆಯಾದ ವ್ಯಕ್ತಿ.

ಪಯಾಝ್ ಅವರು ಶುಕ್ರವಾರ ಕೋಟೆಬಾಗಿಲು ಬಳಿ ಮಸೀದಿಗೆ ನಮಾಝ್‌ಗೆ ತೆರಳುವ ಸಂಧರ್ಭ ಟಿಪ್ಪರ್ ಚಾಲಕ ಹಾರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಧೂಳನ್ನು ಹಾರಿಸಿಕೊಂಡು ಹೋಗಿದ್ದಾನೆ.
ಇದಕ್ಕೆ ಪಯಾಝ್ ನಿಧಾನವಗಿ ಹೋಗುವಂತೆ ಹೇಳಿದ್ದಾರೆ. ಈ ಸಂದರ್ಭ ಇಬ್ಬರ ಮದ್ಯೆ ಮಾತಿನ ಚಕಾಮಕಿ ನಡೆದಿದೆ.

ನಮಾಝ್ ಮುಗಿಸಿಕೊಂಡು ಬಂದಾಗಲೂ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಫಯಾಝ್ ಅವರು ಟಿಪ್ಪರ್‌ನ ಮೆಟ್ಟಿಲು ಮೇಲೆ ಹೋಗಿ ಮಾತನಾಡಿದ್ದು ಆಗ ಹಾರೀಸ್ ಮಾರಾಕಾಸ್ತ್ರದಿಂದ ಅವರ ತಲೆ ಭಾಗಕ್ಕೆ ಹೊಡೆದು ಟಿಪ್ಪರನ್ನು ಚಲಾಯಿಸಿದ್ದಾನೆ.

ಆಯತಪ್ಪಿ ಕೆಳಗೆ ಬಿದ್ದ ಫಯಾಝ್ ಅವರು ರಸ್ತೆಗೆ ಬಿದ್ದಿದ್ದು ಅವರ ಮೇಲೆಯೇ ಟಿಪ್ಪರನ್ನು ಹಾಯಿಸಿದ್ದಾನೆ.ಘಟನೆಯಲ್ಲಿ ಸ್ಥಳದಲ್ಲೆ ಫಯಾಝ್ ಅವರು ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com