ಕಾರ್ಕಳ;ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಬಳಿ ನಡೆದಿದೆ.
ಶಿರ್ಲಾಲು ಹಾಡಿಯಂಗಡಿ ನಿವಾಸಿ ರಜನೀಶ್(18) ಮೃತಪಟ್ಟ ಯುವಕ.
ರಜನೀಶ ಕಳೆದ ಹಲವು ವರ್ಷಗಳಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ರಜನೀಶ್ ಗೆ 3 ವಾರದ ಹಿಂದೆ ಉಡುಪಿಯಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ವತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಇದಾದ 10 ದಿನಗಳ ನಂತರ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಸಿ,ವಾಂತಿ ಹಾಗೂ ಜ್ವರಕ್ಕೆ ಔಷಧಿ ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ.ಆದರೆ ನಿನ್ನೆ ರಜನೀಶ್ ಮೃತಪಟ್ಟ ಬಗ್ಗೆ ವರದಿಯಾಗಿದೆ.