ಕಾರ್ಕಳ; ಬಸ್ & ಬೈಕ್ ನಡುವೆ ಅಪಘಾತ; ಓರ್ವ ಮೃತ್ಯು

ಕಾರ್ಕಳ: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೈಲೂರಿನಲ್ಲಿ ನಡೆದಿದೆ.

ಪಳ್ಳಿ ಕೋಕೈಕಲ್ಲು ನಿವಾಸಿ ನಾಗರಾಜ್ (20) ಮೃತ ಯುವಕನಾಗಿದ್ದು, ಮಂಜು ಗಂಭೀರ ಗಾಯಗೊಂಡ ಸಹ ಸವಾರ.

ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಯರ್ಲಪಾಡಿ – ಗೋವಿಂದೂರು ಕಡೆಯಿಂದ ಬರುತ್ತಿದ್ದ ಬಸ್‌ ಮತ್ತು ಬೈಲೂರು ಹೈಸ್ಕೂಲ್ ಬಳಿಯ ತಿರುವಿನಲ್ಲಿ ಕಾರ್ಕಳದೆಡೆಗೆ ಸಾಗುವ ಬೈಕ್ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸವಾರ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್