ಕಾರ್ಕಳ; ಬೈಕ್ ಗೆ ಬಸ್ ಢಿಕ್ಕಿ, ಯುವಕ ಮೃತ್ಯು

ಕಾರ್ಕಳ:ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ
ಉಡುಪಿ ಕಾರ್ಕಳ ಮುಖ್ಯರಸ್ತೆಯ ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ.

ಜಾರ್ಕಳ ನೆಲ್ಲಿಗುಡ್ಡೆ ನಿವಾಸಿ ಕಾರ್ತಿಕ್(23) ಮೃತಪಟ್ಟ ದುರ್ದೈವಿ.

ಕಾರ್ತಿಕ್ ಬೈಲೂರಿನಿಂದ ಕಾರ್ಕಳದ ಕಡೆಗೆ ಹೋಗುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿಯಾಗಿದೆ. ಸ್ಥಳದಲ್ಲೇ ಕಾರ್ತಿಕ್ ಸಾವನ್ನಪ್ಪಿದ್ದರೆ. ಘಟನೆಯಲ್ಲಿ ಬೈಕ್ ಕೂಡ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಮೃತ ಕಾರ್ತಿಕ್ ಪತ್ನಿ ಹಾಗೂ 10 ತಿಂಗಳ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹದ ಹಸ್ತಾಂತರ ಕಾರ್ಯ ನಡೆಯಲಿದೆ.

ಟಾಪ್ ನ್ಯೂಸ್