ಕಾರ್ಕಳ;ಪೊಲೀಸ್ ಹೆಡ್‌ ಕಾನ್‌ ಸ್ಟೇಬಲ್ ಆತ್ಮಹತ್ಯೆ

ಕಾರ್ಕಳ:ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಹೆಡ್‌ ಕಾನ್‌ ಸ್ಟೇಬಲ್ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಿಯ್ಯಾರು ಎಂಬಲ್ಲಿ ನಡೆದಿದೆ.

ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಹಲವು ದಿನಗಳಿಂದ ರಜೆ ನಿಮಿತ್ತ ಮನೆಯಲ್ಲಿದ್ದರು. ಆದರೆ ಆತ್ಮಹತ್ಯೆ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ಟಾಪ್ ನ್ಯೂಸ್