ಕಾರವಾರ: 3 ವರ್ಷದ ಮಗು ಆಟವಾಡುವಾಗ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ.
ಸೂರಜ್ ಬಂಟ್ ಎಂಬವರ ಪುತ್ರಿ ಸ್ತುತಿ(3) ಮೃತಪಟ್ಟ ಮಗು ಎಂದು ತಿಳಿದು ಬಂದಿದೆ.
ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿ ರಸ್ತೆ ಪಕ್ಕದಲ್ಲೇ ಇದ್ದು ಇದಕ್ಕೆ ಕಟ್ಟಿದ ಕಟ್ಟೆ ಎತ್ತರವಾಗಿರಲಿಲ್ಲ. ಮಗು ಆಟವಾಡುತ್ತಾ ಸಾರ್ವಜನಿಕ ಬಾವಿ ಹತ್ತಿರ ಹೋಗಿದ್ದು, ಈ ವೇಳೆ ಆಯಾ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದೆ.
ಈ ಬಗ್ಗೆ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.