BIG NEWS ಮೂವರು ಮಕ್ಕಳು ಸೇರಿ ಒಂದೇ ಮನೆಯಲ್ಲಿ ಐವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಣ್ಣೂರು:ಕಣ್ಣೂರಿನಲ್ಲಿ ಬುಧವಾರ ಬೆಳಗ್ಗೆ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಶವವಾಗಿ ಪತ್ತೆಯಾಗಿದ್ದಾರೆ.
ಮೃತರು ಚೆರುಪುಳ ಮೂಲದ ಶಾಜಿ ಮತ್ತು ಶ್ರೀಜಾ ಮತ್ತು ಮೂವರು ಮಕ್ಕಳಾದ ಸೂರಜ್, ಸುರಬಿ ಮತ್ತು ಸುಜಿನ್. ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಜಾ ಮತ್ತು ಶಾಜಿ ಪತ್ತೆಯಾಗಿದ್ದಾರೆ.
ಶ್ರೀಜಾ ವೆಂಪಿರಿಂಜನ್, ಅವರ ಪತಿ ಶಾಜಿ ಮತ್ತು ಅವರ ಮೊದಲ ಮದುವೆಯಿಂದ ಹುಟ್ಟಿದ್ದ ಮೂವರು ಮಕ್ಕಳಾದ ಸೂರಜ, ಸುರಭಿ ಮತ್ತು ಸುಜಿತ್ ಮೃತರು.
ಮೇ 16 ರಂದು ದಂಪತಿ ಎರಡನೇ ವಿವಾಹವಾಗಿದ್ದು, ಶ್ರೀಜಾ ಮತ್ತು ಶಾಜಿ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದು, ಮಕ್ಕಳು ಮೆಟ್ಟಿಲಿಗೆ ನೇಣು ಹಾಕಿಕೊಂಡಿದ್ದಾರೆ.
ಮಕ್ಕಳನ್ನು ಹತ್ಯೆ ಮಾಡಿದ ನಂತರ ಶ್ರೀಜಾ ಮತ್ತು ಶಾಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿರುವ ತಮ್ಮ ನಿವಾಸದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಮೆಟ್ಟಿಲು ಬಳಿ ಹಾಗೂ ದಂಪತಿ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.