ರಾಮನಗರ:ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಅಂಗೀಕಾರವಾಗಿದೆ ಎಂದು ವರದಿಯಾಗಿದೆ.ಇದರಿಂದ ಕನಕಪುರ ಬಂಡೆ ನಿಟ್ಟುಸಿರು ಬಿಟ್ಟಿದ್ದಾರೆ.
ಡಿ.ಕೆ ಶಿವಕುಮಾರ್ ಏಪ್ರಿಲ್ 17 ರಂದು ನಾಮಪತ್ರವನ್ನು ಸಲ್ಲಿಸಿದ್ದರು.ಅದರ ಬೆನ್ನಲ್ಲೇ ಅವರ ನಾಮಪತ್ರವನ್ನು ಅಮಾನ್ಯ ಸಾಧ್ಯತೆ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತ್ತು.
ಅವರ ನಾಮಪತ್ರದಲ್ಲಿ ಕೆಲವು ಮಾಹಿತಿಗಳು ಸರಿ ಇಲ್ಲ ಎಂದು ಬಿಜೆಪಿ ಪರ ವಕೀಲರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆರೋಪಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ದಾಖಲೆಗಳು ಇಲ್ಲದೇ ಇದ್ದರಿಂದ ಡಿ.ಕೆ ಶಿವಕುಮಾರ್ ಅವರ ನಾಮಪತ್ರವನ್ನು ಪುರಸ್ಕರ ಮಾಡಲಾಗಿದೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಬಳಿಕ ಅಮಾನ್ಯತೆ ಸಾಧ್ಯತೆ ಬಗ್ಗೆ ಮಾಹಿತಿ ಸಿಕ್ಕಿದ ಕಾರಣದಿಂದ ನಿನ್ನೆ ನಾಮಪತ್ರವನ್ನು ಡಿ.ಕೆ ಸುರಶ್ ಅವರು ಕೂಡ ಸಲ್ಲಿಸಿದ್ದರು. ಇದೀಗ ಶಿವಕುಮಾರ್ ಅವರ ನಾಮಪತ್ರ ಅಂಗೀಕಾರದ ಹಿನ್ನೆಲೆ ನಾಳೆ ಡಿಕೆ ಸುರೇಶ್ ಅವರು ನಾಮಪತ್ರ ಹಿಂತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಕೆಲವೊಂದು ಕುತಂತ್ರಗಳು ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಮ ಪಾತ್ರ ಸಲ್ಲಿಕೆ ಮಾಡಿದ್ದೇನೆ ಎಂದು ಡಿ.ಕೆ. ಸುರೇಶ್ ಅವರು ನಿನ್ನೆ ಹೇಳಿದ್ದರು.
ಬಿಜೆಪಿ ಅವರು ಮೊದಲೇ ಹೇಳಿದ್ದಾರೆ. ಟಿಕೆಟ್ ಘೋಷಣೆ ಮಾಡುವ ವೇಳೆ ಡಿಕೆಶಿಗೆ ಟಕ್ಕರ್ ಕೊಡ್ತೀವಿ ಎಂದು ಹೇಳಿದ್ದಾರೆ.ನಾವು ಕೂಡ ಮುಂಜಾಗ್ರತಾ ಕ್ರಮವಾಗಿ ರೆಡಿಯಾಗಿದ್ದೇವೆ.ಬಿಜೆಪಿ ಅವರು ಏನು ಮಾಡಿದ್ರೂ ಸಹ ಏನು ಆಗುವುದಿಲ್ಲ.ಅವರು ನಾಮ ಪತ್ರ ರಿಜೆಕ್ಟ್ ಮಾಡಿಸುತ್ತಾರೆ ಅನ್ನೋ ಅನುಮಾನ ಇದೆ.ಇದು ನನ್ನ ಮತ ಕ್ಷೇತ್ರ.ಏನೇ ಕುತಂತ್ರ ಮಾಡಿದ್ರು ಜನ ಅದಕ್ಕೆ ಉತ್ತರ ಕೊಡ್ತಾರೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.