ಪೂಕೋಯ ತಂಙಳ್‌ & ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಆಸ್ತಿ ಮುಟ್ಟುಗೋಲು

ಕೇರಳ; ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸ ಮುಸ್ಲಿಂಲೀಗ್‌ ನೇತಾರರಾದ ಪೂಕೋಯ ತಂಙಳ್‌ ಮತ್ತು ಚೇರ್ಮನ್‌ ಆಗಿರುವ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮುಸ್ಲಿಂ ಲೀಗ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಮಾಜಿ ಶಾಸಕ ಎಂಸಿ ಕಮರುದ್ದೀನ್ ಸೇರಿದಂತೆ ಫ್ಯಾಷನ್ ಗೋಲ್ಡ್ ಹೂಡಿಕೆ ವಂಚನೆ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.

ಅಪರಾಧ ವಿಭಾಗದ ಎಸ್ಪಿ ಸದಾನಂದ್ ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಹೂಡಿಕೆ ವಂಚನೆಗಳಿಗೆ ಸಂಬಂಧಿಸಿದಂತೆ 2019 ರ ಬಿಡಿಎಸ್ ಕಾಯಿದೆಯ ಉಪವಿಭಾಗ 3 ರ ಸೆಕ್ಷನ್ 7 ರ ಅಡಿಯಲ್ಲಿ ತನಿಖಾ ತಂಡವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪಯ್ಯನ್ನೂರು ಪೇಟೆಯಲ್ಲಿ ಫ್ಯಾಶನ್ ಗೋಲ್ಡ್ ಎಂಟರ್‌ಪ್ರೈಸ್ ಒಡೆತನದ 6 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಅಂಗಡಿಗಳು, ಬೆಂಗಳೂರಿನ ಸಿಲಿಗುಂದ ಗ್ರಾಮದಲ್ಲಿ ಎಂ.ಡಿ.ಪೂಕೋಯ ತಂಙಳ್ ಅವರ 10 ಕೋಟಿ ರೂಪಾಯಿ ಮೌಲ್ಯದ ಒಂದು ಎಕರೆ ಜಮೀನು ಮತ್ತು ಕಾಸರಗೋಡಿನ 5 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಶೋರೂಮ್‌ಗಳು ಮುಟ್ಟುಗೋಳು ಹಾಕಿರುವ ಶೋರೂಂಗಳಲ್ಲಿ ಸೇರಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್