ಬುರ್ಖಾ ಏಕೆ ಧರಿಸಿಲ್ಲ ಎಂದು ವಿದ್ಯಾರ್ಥಿನಿಗೆ ಗದರಿದ ಆರೋಪ, ಬಸ್ ಚಾಲಕ ಅಮಾನತು

ಕಲಬುರ್ಗಿ;ಮುಸ್ಲಿಂ ವಿದ್ಯಾರ್ಥಿನಿಗೆ ಏಕೆ ಬುರ್ಖಾ ಧರಿಸಲಿಲ್ಲ ಎಂದು ಗದರಿಸಿ ಬಸ್ ಪ್ರಯಾಣಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿತ ಬಸವ ಕಲ್ಯಾಣ ಡಿಪೊದ ಬಸ್ ಚಾಲಕ ಮಹಿಬೂಬ್ ಪಟೇಲ್ ಎಂಬವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್.ಫುಲೇಕರ್ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಶಾಲೆ ಬಿಟ್ಟು ಮನೆಗೆ ತೆರಳಲು ಬಸ್ ಹತ್ತಲು ಮುಂದಾಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದಳು. ಇದಕ್ಕೆ ಪ್ರಶ್ನಿಸಿದ ಮಹಿಬೂಬ್ ಪಟೇಲ್, ‘ಬುರ್ಖಾ ಏಕೆ ಹಾಕಿಕೊಂಡಿಲ್ಲ’ ಎಂದು ಗದರಿಸಿದ್ದರು ಎನ್ನಲಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಬಸ್ ನಿಲ್ದಾಣದಲ್ಲಿ ಗುರುವಾರ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ಇದರ ಬೆನ್ನಲ್ಲೇ‌ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ ಚಾಲಕನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಜೊತೆಗೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.ಟಾಪ್ ನ್ಯೂಸ್