ಕಲಬುರ್ಗಿ; ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ, ಆತಂಕಿತರಾದ ಜನ

ಕಲಬುರಗಿ;ಜಿಲ್ಲೆಯ ಹಲವೆಡೆ ಲಘು ಭೂಕಂಪನ ಸಂಭವಿಸಿದೆ.ಇದರಿಂದ ಜನರು ಆತಂಕಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ.

ಇಂದು ಬೆಳಗ್ಗೆ 9.48 ರ ಸಮಯದಲ್ಲಿ 5 ಸೆಕೆಂಡ್‌ ಭೂಮಿ ಕಂಪಿಸಿದೆ.ರಿಕ್ಟರ್‌ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ.

ಬೆನಕನಹಳ್ಳಿ,ಸೇಡಂ ತಾಲೂಕಿನ ಹಲವೆಡೆ ಭೂಕಂಪನವಾಗಿರುವುದು ತಿಳಿದುಬಂದಿದೆ.ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಕಾರಣ, ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.

ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್