ಬೀದರ್ ; ಕುಡಿದ ಮತ್ತಿನಲ್ಲಿ ಗುದದ್ವಾರದಲ್ಲಿ ಲೋಟ ತುರುಕಿಸಿದ ವ್ಯಕ್ತಿ, ಸ್ಥಿತಿ ಗಂಭೀರ

ಬೀದರ್;ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಗುದದ್ವಾರದಲ್ಲಿ ಲೋಟ ತುರುಕಿಸಿದ ವಿಚಿತ್ರ ಪ್ರಸಂಗ ನಡೆದಿದೆ.

ಬೀದರ್‌ ಜಿಲ್ಲೆಯ ಚಿಟಗುಪ್ಪಾದ 38 ವರ್ಷದ ವ್ಯಕ್ತಿಗೆ ಕಲಬುರಗಿಯ ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಶಸ್ತಚಿಕಿತ್ಸೆ ಮಾಡಿ ರಕ್ಷಿಸಿದೆ.

ಕುಡಿದ ನಶೆಯಲ್ಲಿ ವಿಕೃತಿ ಮೆರೆದು ಈತ ಸ್ಟೀಲ್ ಲೋಟವನ್ನು ಗುದದ್ವಾರದ ಮೂಲಕ ಹೊಟ್ಟೆಗೆ ತುರುಕಿದ್ದ. ಘಟನೆಯಿಂದ ವ್ಯಕ್ತಿಯ ಕರುಳಿಗೆ ಡ್ಯಾಮೇಜ್ ಆಗಿತ್ತು. ಕರುಳು ಡ್ಯಾಮೇಜ್ ಆಗಿದ್ದರಿಂದ ವಿಪರೀತ ರಕ್ತಸ್ರಾವ ಉಂಟಾಗಿತ್ತು. ಅತೀವ ರಕ್ತಸ್ರಾವದಿಂದ ಕಂಗೆಟ್ಟ ಈತ ಬೀದರ್‌ನಿಂದ ಕಲಬುರಗಿಗೆ ತೆರಳಿ ಆಸ್ಪತ್ರೆಗೆ ತೆರಳಿದ್ದ.

ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ ರಾತ್ರೋ ರಾತ್ರಿ ಸರ್ಜರಿಯ ಪ್ಲ್ಯಾನ್ ಮಾಡಿಕೊಂಡು ತುರ್ತು ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿನ ಸ್ಟೀಲ್ ಗ್ಲಾಸ್‌ನ್ನು ಹೊರತೆಗೆದಿದ್ದಾರೆ. ಜತೆಗೆ ಡ್ಯಾಮೇಜ್ ಆಗಿರುವ ಕರುಳನ್ನು ಶಸ್ತ್ರಚಿಕಿತ್ಸೆ ಮೂಲಕ‌ ಜೋಡಿಸಿದ್ದಾರೆ.

ಟಾಪ್ ನ್ಯೂಸ್