ಬರೊಬ್ಬರಿ 20 ಕೋಟಿ ನೀಡಿ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ‌ ವ್ಯಕ್ತಿ

ಬೆಂಗಳೂರು;ಕಕೇಶಿಯನ್ ಶೆಫರ್ಡ್ ನಾಯಿಯನ್ನು 20 ಕೋಟಿ ರೂ.ನೀಡಿ ಬೆಂಗಳೂರಿನ‌ ವ್ಯಕ್ತಿಯೊಬ್ಬರು ಖರೀದಿಸಿ ಸುದ್ದಿಯಾಗಿದ್ದಾರೆ.

ಸತೀಶ್ ಎಂಬವರು ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರಿಂದ ಈ ಅಪರೂಪದ ನಾಯಿ ಖರೀದಿಸಿದ್ದಾರೆ.

ಕಾಡಬೊಮ್ ಹೇಡರ್ ಎಂಬ ಹೆಸರಿನ ಈ ನಾಯಿ, ಅತ್ಯುತ್ತಮ ನಾಯಿ ತಳಿ ವಿಭಾಗದಲ್ಲಿ ಒಟ್ಟು 32 ಪದಕಗಳನ್ನು ಗೆದ್ದಿದೆ.ಸಂಪೂರ್ಣವಾಗಿ ಬೆಳೆದ ಕಕೇಶಿಯನ್ ಶೆಫರ್ಡ್ ಸುಮಾರು 44 ರಿಂದ 77 ಕೆಜಿ ತೂಗುತ್ತದೆ ಮತ್ತು 23 ರಿಂದ 30 ಇಂಚುಗಳಷ್ಟು ಎತ್ತರವನ್ನು ಹೊಂದಿರುತ್ತದೆ. ಇದರ ಜೀವಿತಾವಧಿ 10 ರಿಂದ 12 ವರ್ಷಗಳು.

ಸತೀಶ್‌ ಅವರು ಈ ಹಿಂದೆಯೂ ನಾಯಿಗಳ ದುಬಾರಿ ತಳಿಗಳನ್ನು ಖರೀದಿಸಿದ್ದರು.

ಟಾಪ್ ನ್ಯೂಸ್