ಬೆಳ್ತಂಗಡಿ;ಕಾಜೂರು ಉರೂಸ್ ಗೆ ತೆರಳಿ ವಾಪಾಸ್ಸಾಗುವಾಗ ರಿಕ್ಷಾ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಕಕ್ಕಿಂಜೆ ಕತ್ತರಿ ಗುಡ್ಡೆಯ ಸಫೀಯಾ( 55) ಮೃತರು.ಇವರು ಕಾಜೂರು ಉರೂಸ್ ಹಿನ್ನೆಲೆ ಕಕ್ಕಿಂಜೆಯಿಂದ ರಿಕ್ಷಾದಲ್ಲಿ ನಿನ್ನೆ ರಾತ್ರಿ ತೆರಳಿದ್ದರು. ಮುಂಡಾಜೆ ಸೋಮತ್ತಡ್ಕ ಚಡಾವು ಬಳಿ ರಿಕ್ಷಾ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಸಫೀಯಾ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ. ಸಫೀಯಾ ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಇದೆ.