ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿ ವಿಚಿತ್ರವಾಗಿ ಕೂಗತೊಡಗಿರುವ ಘಟನೆ ಕ್ಯೋಟೋ ಬಳಿಯ ಜಪಾನಿನ ದ್ವೀಪದ ಬೀದಿಗಳಲ್ಲಿ ಕಂಡು ಬಂದಿದ್ದು, ಜನರು ಆತಂಕಿತರಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಹೊನ್ಶು ದ್ವೀಪದ ಬೀದಿಗಳಲ್ಲಿ ಪಕ್ಷಿಗಳು ವಿಚಿತ್ರ ರೀತಿಯಲ್ಲಿ ಸೇರಿ ಕೂಗಾಡಿದ್ದವು.
ಕಾಗೆಗಳ ಈ ವರ್ತನೆಗೆ ಜನರು ಆತಂಕಿತರಾಗಿದ್ದಾರೆ. ನೈಸರ್ಗಿಕ ವಿಕೋಪದ ಕುರಿತು ಪ್ರಾಣಿ, ಪಕ್ಷಿಗಳಿಗೆ ಮೊದಲೇ ಅರಿವಿಗೆ ಬರುವ ಕಾರಣ ಅದು ಮಾಹಿತಿ ನೀಡುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ಇನ್ನು ಇದು ವಿನಾಶದ ಸೂಚನೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.