ಕಡಬ; ಧಾರ್ಮಿಕ ಕೇಂದ್ರದ ಆವರಣದಲ್ಲಿ ಜೈಶ್ರೀರಾಂ ಘೋಷಣೆ; ಇಬ್ಬರ ಬಂಧನ

ಕಡಬ; ಮರ್ದಾಳ ಮಸೀದಿಯ ಆವರಣಕ್ಕೆ ಪ್ರವೇಶಿಸಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ಕೀರ್ತನ್‌ ಹಾಗೂ ಕೈಕಂಬ ನಿವಾಸಿ ಸಚಿನ್‌ ಬಂಧಿತರು.

ರಾತ್ರಿ ಬೈಕ್‌ನಲ್ಲಿ ಆಗಮಿಸಿದ ಆರೋಪಿಗಳು ಮಸೀದಿಯ ವರಾಂಡದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದರು. ಸದ್ದು ಕೇಳಿ ಮಸೀದಿಯಿಂದ ಹೊರಬಂದ ಧರ್ಮಗುರುಗಳನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ.

ಆರೋಪಿಗಳು ಬೈಕಿನಲ್ಲಿ ಮಸೀದಿಯ ಆವರಣದ ಒಳಗಡೆ ಬಂದು ತೆರಳುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದು,ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್