‘ಲೇಡಿ ಸಿಂಘಂ’ ಎಂದೇ ಹೆಸರು ಪಡೆದಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು; ಸಾವಿನ‌ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುಟುಂಬ

ನಾಗಾಂವ್: ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದ ಅಸ್ಸಾಂ ಪೊಲೀಸ್‌ನ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಜುನ್ಮೋನಿ ರಭಾ ಮಂಗಳವಾರ ಮುಂಜಾನೆ ನಾಗಾವ್ ಜಿಲ್ಲೆಯಲ್ಲಿ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಲೇಡಿ ಸಿಂಘಂ’ ಅಥವಾ ‘ದಬಾಂಗ್ ಕಾಪ್’ ಎಂದು ಜನಪ್ರಿಯವಾಗಿರುವ ಜುನ್ಮೋನಿ ರಭಾ,(30) ತನ್ನ ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿದ್ದರು ಮತ್ತು ಸಮವಸ್ತ್ರದಲ್ಲಿ ಇರಲಿಲ್ಲ.

ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಸಿಐಡಿ ಅಪಘಾತದ ಬಗ್ಗೆ ತನಿಖೆ ನಡೆಸುತ್ತದೆ, ಜೊತೆಗೆ ಅಪಘಾತದ ಗಂಟೆಗಳ ಮೊದಲು ಆಕೆಯ ವಿರುದ್ಧ ಸುಲಿಗೆ ಪ್ರಕರಣವನ್ನು ದಾಖಲಿಸಲಾಗಿದೆ.

ಘಟನೆಯ ಕುರಿತು ಶಂಕೆ ವ್ಯಕ್ತಪಡಿಸಿರುವ ಆಕೆಯ ಕುಟುಂಬವು ಅಪಘಾತದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.

ಬೆಳಿಗ್ಗೆ 2:30 ರ ಸುಮಾರಿಗೆ ಮಾಹಿತಿ ಪಡೆದ ನಂತರ, ಪೊಲೀಸ್ ಗಸ್ತು ತಂಡವು ಸ್ಥಳಕ್ಕೆ ತಲುಪಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಜಖಲಬಂಧ ಪೊಲೀಸ್ ಠಾಣಾಧಿಕಾರಿ ಪವನ್ ಕಲಿತಾ ತಿಳಿಸಿದ್ದಾರೆ.

ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಂಟೈನರ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.ನಾಗಾಂವ್ ಪೊಲೀಸ್ ಅಧೀಕ್ಷಕಿ ಲೀನಾ ಡೋಲಿ ಅವರು ಬೆಳಿಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ಮಧ್ಯೆ ಎಸ್‌ಐ ತನ್ನ ಖಾಸಗಿ ಕಾರಿನಲ್ಲಿ ಯಾವುದೇ ಭದ್ರತೆಯಿಲ್ಲದೆ ಸಿವಿಲ್ ಬಟ್ಟೆಯಲ್ಲಿ ಏಕಾಂಗಿಯಾಗಿ ಏಕೆ ಹೋಗುತ್ತಿದ್ದರು ಎಂಬುದರ ಕುರಿತು ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.ಆಕೆಯ ಕುಟುಂಬದ ಸದಸ್ಯರಿಗೂ ಆಕೆಯ ಚಲನವಲನದ ಬಗ್ಗೆ ಅರಿವಿರಲಿಲ್ಲ.ಕುಟುಂಬಸ್ಥರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಜನ್ಮೋನಿ ತಾಯಿ ಸುಮಿತ್ರಾ ರಾಭಾ, ಇದೊಂದು ಪೂರ್ವ ಯೋಜಿತ ಕೊಲೆ ಪ್ರಕರಣ ಎಂದು ಆರೋಪಿಸಿದ್ದಾರೆ.

ಜುನ್ಮೋನಿಯ ಚಿಕ್ಕಮ್ಮ ಸುವರ್ಣಾ ಬೋಡೋ ಅವರು ಮಾತನಾಡಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮತ್ತು “ಯೋಜಿತವಾಗಿ ಸೃಷ್ಟಿಸಿದ” ಅಪಘಾತದ ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಸೋಮವಾರ ರಾತ್ರಿ, ಉನ್ನತ ಪೊಲೀಸ್ ಅಧಿಕಾರಿಗಳ ತಂಡವು ನಾಗಾನ್‌ನಲ್ಲಿರುವ ಜುನ್ಮೋನಿಯ ಅಧಿಕೃತ ಕ್ವಾಟರ್ಸ್ ನಿಂದ ದಾಳಿ ನಡೆಸಿ ಸುಮಾರು 1 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ. ದಾಳಿಯ ಸಮಯದಲ್ಲಿ ಆಕೆಯ ತಾಯಿ ಕೂಡ ಇದ್ದರು ಎಂದು ಸುವರ್ಣ ಬೋಡೋ ಹೇಳಿದ್ದಾರೆ. ವಶಪಡಿಸಿಕೊಂಡ ಹಣವು ಜುನ್ಮೋನಿಯ ತಾಯಿಗೆ ಸೇರಿದ್ದು, ಅವರು ಕೋಳಿ ಮತ್ತು ಹಂದಿ ಸಾಕಾಣಿಕೆಯ ಸಣ್ಣ ವ್ಯಾಪಾರದಿಂದ ಗಳಿಸಿದರು ಎಂದು ಅವರು ಹೇಳಿದ್ದಾರೆ.

ಎಸ್‌ಐ ಜುನ್ಮೋನಿ ರಾಭಾ ಅವರ ಸಾವಿನ ಬಗ್ಗೆ ಸಮಾಜದ ವಿವಿಧ ವರ್ಗಗಳಿಂದ ನ್ಯಾಯಯುತ ತನಿಖೆಯ ಕೋರಿಕೆಯ ಹಿನ್ನೆಲೆಯಲ್ಲಿ, ತನಿಖೆಯನ್ನು ಸಿಐಡಿ ಅಸ್ಸಾಂಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿಯಾಗಿದ್ದ ರಭಾ ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಸರುವಾಸಿಯಾಗಿದ್ದರು ಆದರೆ ಅವರು ಹಣಕಾಸಿನ ಅಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಸುದ್ದಿಯಲ್ಲಿದ್ದರು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com