ಹೈಕೋರ್ಟ್ ಜಡ್ಜ್ ಕಾರನ್ನು ಯಾರಿಗೂ ತಿಳಿಯದಂತೆ ಜಾಲಿ ರೈಡ್ ಗೆ ಕೊಂಡೊಯ್ದ ಪೇದೆ, ಕಾರು ಕಂಬಕ್ಕೆ ಢಿಕ್ಕಿ ಹೊಡೆದು ಜಖಂ; ಮುಂದೇನಾಯ್ತು ಗೊತ್ತಾ?

ಹೈಕೋರ್ಟ್ ಜಡ್ಜ್ ಕಾರನ್ನು ಯಾರಿಗೂ ತಿಳಿಯದಂತೆ ಜಾಲಿ ರೈಡ್ ಗೆ ಕೊಂಡೊಯ್ದ ಪೇದೆ, ಕಾರು ಕಂಬಕ್ಕೆ ಢಿಕ್ಕಿ ಹೊಡೆದು ಜಖಂ; ಮುಂದೇನಾಯ್ತು ಗೊತ್ತಾ?

ನಾಗ್ಪುರ;ಹೈಕೋರ್ಟ್ ನ್ಯಾಯಾಧೀಶರ ಅಧಿಕೃತ ಕಾರನ್ನು ಜಾಲಿ ರೈಡ್‌ಗೆ ತೆಗೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಕ್ಕಾಗಿ ಪೊಲೀಸ್ ಪೇದೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೇದೆಯನ್ನು ವಜಾಗೊಳಿಸಿದ್ದಲ್ಲದೆ, ಕಾನ್ಸ್‌ಟೇಬಲ್‌ನ ಜೇಬಿನಿಂದ ಕಾರಿನ ರಿಪೇರಿ ವೆಚ್ಚವನ್ನು ವಸೂಲಿ ಮಾಡುವಂತೆ ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

2016 ರಲ್ಲಿ ಪೊಲೀಸ್ ಪಡೆಗೆ ಸೇರಿದ್ದ ಕಾನ್‌ಸ್ಟೆಬಲ್, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ವಾಲ್ಮೀಕಿ ಸಾ ಮೆನೆಜಸ್ ಅವರ ಅಧಿಕೃತ ಬಂಗಲೆಯಲ್ಲಿ ಕಾವಲು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟರು.

ಪೇದೆ ಜಡ್ಜ್ ಕಾರಿನಲ್ಲಿ ಜಾಲಿ ರೌಂಡ್ಸ್ ಹೋಗಿ ನಾಗ್ಪುರ ಸಿಟಿ ಸೇರಿದಂತೆ ಹಲೆವೆಡೆ ಸುತ್ತಾಡಿದ್ದಾನೆ. ಆದರೆ ಸಂಭ್ರಮದಲ್ಲಿ ಕಾರನ್ನು ರಿವರ್ಸ್ ತೆಗೆಯುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನ ಹೈಫೈ ರಿವರ್ಸ್‌ಗೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.ತನ್ನ ಜಾಲಿ ರೈಡ್ ಸಂಭ್ರಮ ಒಮ್ಮೆಲೆ ಇಳಿದಿದೆ.

ಕಾರು ಸರಿಮಾಡಲು ಗ್ಯಾರೇಜಿಗೆ ಕೊಟ್ಟರೆ, ರಿಪೇರಿ ಮಾಡಿ ಕೊಡುವಾಗ ಒಂದು ವಾರವೇ ಕಳೆಯಲಿದೆ.ಎರಡು ದಿನದಲ್ಲಿ ಜಡ್ಜ್ ಮನೆಗೆ ವಾಪಾಸ್ ಆಗಲಿದ್ದಾರೆ.ಇನ್ನು ಅಪಘಾತದ ವಿಚಾರ ಬಹಿರಂಗವಾಗಲಿದೆ ಎಂದು ಪೊಲೀಸ್ ಪೇದೆ ಆಗೆಯೇ ಕಾರನ್ನು ಹಾಗೇ ಜಡ್ಜ್ ಮನೆಗೆ ತಂದು ಪಾರ್ಕ್ ಮಾಡಿದ್ದಾನೆ.

ಜಡ್ಜ್ ಬಂದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರನ್ನು ನೋಡಿದರೆ ಹಾನಿಯಾಗಿದೆ. ನಿಲ್ಲಿಸಿದ್ದ ಕಾರು ನಜ್ಜು ಗುಜ್ಜಾಗಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತನಗೇನು ಗೊತ್ತಿಲ್ಲ ಎಂದಿದ್ದಾನೆ.

ಹೈಕೋರ್ಟ್‌ ಜಡ್ಜ್ ಆದ ಪ್ರಕರಣ ದಾಖಲಾಯಿತು. ಪೊಲೀಸರು ತನಿಖೆ ಆರಂಭಿಸಿದರು.ಸಿಸಿಟಿವಿ ದೃಶ್ಯಗಳನ್ನು ಪರೀಶೀಲನೆ ನಡೆಸಿದಾಗ ಪೇದೆಯ ಅಸಲಿಯತ್ತು ಬಯಲಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com