ಕಠಿಣ UAPAಯಡಿ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲು; ವರದಿ

ನವದೆಹಲಿ;2010ರಿಂದ ಇಲ್ಲಿಯವರೆಗೆ ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ 1967ರ ಯುಎಪಿಎ ಅಡಿಯಲ್ಲಿ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ ಎಂದು ದಿ ವೈರ್‌ ವರದಿ ಮಾಡಿದೆ.

ಸಮಾಜದಲ್ಲಿನ ಕೆಲ ನ್ಯೂನ್ಯತೆಗಳ, ಸಮಸ್ಯೆಗಳ ಕುರಿತು ತನಿಖೆ ಮಾಡಲು ಮತ್ತು ವರದಿ ಮಾಡಲು ಬಯಸುವ ಪತ್ರಕರ್ತರ ವಿರುದ್ಧ UAPA ಕಾಯ್ದೆಯನ್ನು ಬಳಸಿದಾಗ, ಅದು ಅವರ ಕಾನೂನುಬದ್ಧ ಕೆಲಸವನ್ನು ಅಪರಾಧೀಕರಿಸಲು ಮತ್ತು ಅವರನ್ನು “ಭಯೋತ್ಪಾದಕರು” ಎಂದು ಕಳಂಕಗೊಳಿಸುವ ಕೆಲಸ ಮಾಡುತ್ತದೆ. ಇದಲ್ಲದೆ ಅವರ ಘನತೆಗೆ ಚ್ಯುತಿ ತರುವ ಮತ್ತು ಅವರನ್ನು ವಿನಾಃಕಾರಣ ಕಾನೂನು ಪ್ರಕ್ರಿಯೆಗಳ ಹಿಂದೆ ಅಲೆದಾಡಿಸಲು ಪ್ರಯತ್ನಿಸುತ್ತದೆ. ಇದು ಅವರ ವೃತ್ತಿಪರ ಕೆಲಸದ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತದೆ.

ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಯುಎಪಿಎ ಕಾಯ್ದೆ ಜಾರಿಗೆ ತರಲಾಗಿದೆ.ರಾಷ್ಟ್ರೀಯ ಭದ್ರತೆ ಮತ್ತು ಆಪಾದಿತ ದೇಶವಿರೋಧಿ ಚಟುವಟಿಕೆಗಳನ್ನು ಕೂಡ ಯುಎಪಿಎಯಡಿ ಸೇರಿಸಲಾಗಿದೆ.

ಇತ್ತೀಚಿಗೆ ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಮೇಲೆ ಯುಎಪಿಎಯಡಿ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್ನ ಹೆಚ್‌ಆರ್ ಅಮಿತ್ ಚಕ್ರವರ್ತಿ ವಿರುದ್ಧದ ಎಫ್‌ಐಆರ್‌ನಲ್ಲಿ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳು), 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು), 18 (ಪಿತೂರಿ) ಮತ್ತು ಯುಎಪಿಎ ಜೊತೆಗೆ ಐಪಿಸಿ ಸೆಕ್ಷನ್ 153ಎ (ವಿವಿಧ ಗುಂಪಿನ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 120 ಬಿ (ಅಪರಾಧ ಪಿತೂರಿ) ಆರೋಪವನ್ನು ಹೊರಿಸಲಾಗಿದೆ.

ಫ್ರೀ ಸ್ಪೀಚ್ ಕಲೆಕ್ಟಿವ್ನ ಅಧ್ಯಯನದ ಪ್ರಕಾರ 2010-20ರವರೆಗೆ ಭಾರತದಲ್ಲಿ 154 ಪತ್ರಕರ್ತರನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಲಾಗಿದೆ ಅಥವಾ ಅವರ ವೃತ್ತಿಪರ ಕೆಲಸಕ್ಕಾಗಿ ಅವರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 40 ಪ್ರತಿಶತ 2020ರಲ್ಲಿ ನಡೆದಿದೆ ಎಂದು ತಿಳಿಸಿದೆ. ಇದಲ್ಲದೆ 9 ವಿದೇಶಿ ಪತ್ರಕರ್ತರು ಗಡೀಪಾರು, ಬಂಧನ, ಭಾರತಕ್ಕೆ ಪ್ರವೇಶವನ್ನು ನಿರಾಕರಣೆ ತೊಡಕುಗಳನ್ನು ಎದುರಿಸಿದ್ದಾರೆ.

ಭಾರತದಲ್ಲಿ UAPA ಅಡಿಯಲ್ಲಿ ಪತ್ರಕರ್ತರ ಮೇಲೆ ದಾಖಲಾದ ಪ್ರಕರಣಗಳು
ಪತ್ರಕರ್ತರ ಮೇಲೆ ಪ್ರಸ್ತುತ UAPA ಅಡಿಯಲ್ಲಿ ದಾಖಲಾಗಿರುವ ಪ್ರಕರಣ :16
ಯುಎಪಿಎಯಡಿ ಬಂಧಿತ ಪತ್ರಕರ್ತರು:07
ಯುಎಪಿಎಯಡಿ ಜಾಮೀನಿನ ಮೇಲೆ ಇರುವ ಪತ್ರಕರ್ತರು:08
ಯುಎಪಿಎಯಡಿ ಆರೋಪಿತ ಬಂಧನವಾಗದ ಪತ್ರಕರ್ತರ ಸಂಖ್ಯೆ:01
ಯುಎಪಿಎಯಡಿ ಖುಲಾಸೆಗೊಂಡ ಪತ್ರಕರ್ತರು:01
ಯುಎಪಿಎಯಿಂದ ಮುಕ್ತಗೊಂಡ ಪತ್ರಕರ್ತರು:01

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು