106 ವರ್ಷದ ಅಜ್ಜಿಗೆ ಬಂದ‌ ಹಲ್ಲು; ತೊಟ್ಟಿಲಲ್ಲಿ ಹಾಕಿ ಅಜ್ಜಿಗೆ ಜೋಕಾಲಿ ಹಾಡಿದ ಮಕ್ಕಳು; ಅಪರೂಪದ ವಿಡಿಯೋ ವೀಕ್ಷಿಸಿ….

ಅಚ್ಚರಿಯ ಸುದ್ದಿಯೊಂದರಲ್ಲಿ 106 ವರ್ಷದ ಅಜ್ಜಿಗೆ ಹಲ್ಲು
ಬಂದಿದ್ದು, ಕುಟುಂಬಸ್ಥರು ತೊಟ್ಟಿಲಲ್ಲಿ ಹಾಕಿ ಜೋಕಾಲಿ ಹಾಡಿ ಸಂಭ್ರಮಿಸಿದ್ದಾರೆ.

ಅಜ್ಜಿ ಹೆಸ್ರು ಧಾನವ್ವ ಉಡ್ಗೆ. ಈಕೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರು. 100 ವರ್ಷ ದಾಟುವಷ್ಟರಲ್ಲೇ ಧಾನವ್ವಳ ಬಾಯಲ್ಲಿದ್ದ ಹಲ್ಲುಗಳೆಲ್ಲಾ ಬಿದ್ದು ಹೋಗಿದ್ದವು. ಇದೀಗ 106ನೇ ವಯಸ್ಸಿಗೆ ಧಾನವ್ವಳಿಗೆ ಹೊಸ ಹಲ್ಲು ಬಂದಿದೆ.

ಇದರಿಂದ ಮನೆಯ ಹೆಣ್ಣು ಮಕ್ಕಳೆಲ್ಲಾ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ.ಅಜ್ಜಿಯನ್ನು ಮಗುವಿನಂತೆ ತೊಟ್ಟಿಲಲ್ಲಿ ಕೂರಿಸಿ ಸಂಭ್ರಮಿಸಿದ್ದಾರೆ.

ಈ ಕುರಿತ ವಿಡಿಯೋ ಇದೀಗ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ.

ಟಾಪ್ ನ್ಯೂಸ್