ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ; 40,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ; 40,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ: ದೇಶದಾದ್ಯಂತ ಸರಿಸುಮಾರು 40,000 ಕ್ಕೂ‌ ಅಧಿಕ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅಂಚೆ ಇಲಾಖೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಆಸಕ್ತ ಅಭ್ಯರ್ಥಿಗಳು
ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ.

ಅರ್ಜಿ ಶುಲ್ಕ : ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಪುರುಷರಿಗೆ: 100 ರೂ.

ಮಹಿಳಾ, ಎಸ್ಸಿ / ಎಸ್ಟಿ ಅಭ್ಯರ್ಥಿಗಳು ಮತ್ತು ವಿಕಲಚೇತನ ಅಭ್ಯರ್ಥಿಗಳು: ಶೂನ್ಯ
ಪಾವತಿ ವಿಧಾನ: ಕ್ರೆಡಿಟ್ / ಡೆಬಿಟ್ ಕಾರ್ಡ್ ಗಳು ಮತ್ತು ನೆಟ್ ಬ್ಯಾಂಕಿಂಗ್

ಪ್ರಮುಖ ದಿನಾಂಕಗಳು :
ನೋಂದಣಿ ಮತ್ತು ಶುಲ್ಕ ಪಾವತಿಗೆ ಆರಂಭಿಕ ದಿನಾಂಕ: 02-05-2022
ನೋಂದಣಿ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 05-06-2022

05-06-2022 ರಂತೆ ವಯಸ್ಸಿನ ಮಿತಿ
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 40 ವರ್ಷಗಳು
ನಿಯಮಗಳ ಪ್ರಕಾರ ಎಸ್ಸಿ / ಎಸ್ಟಿ / ಒಬಿಸಿ / ಪಿಡಬ್ಲ್ಯೂಡಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ

ವಿದ್ಯಾರ್ಹತೆ
ಅಭ್ಯರ್ಥಿಗಳು 10 ನೇ ತರಗತಿ, ಸ್ಥಳೀಯ ಭಾಷೆಯ ಕಡ್ಡಾಯ ಜ್ಞಾನವನ್ನು ಹೊಂದಿರಬೇಕು.
ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಟಾಪ್ ನ್ಯೂಸ್