ಖಾಲಿ ಇರುವ ಒಂದು ಹುದ್ದೆಗೆ ಬರೊಬ್ಬರಿ 22,000 ಕ್ಕೂ ಅಧಿಕ ಅರ್ಜಿ; 43 ಪರೀಕ್ಷಾ ಕೇಂದ್ರ! ಅಷ್ಟಕ್ಕೂ ಯಾವುದು ಈ ಹುದ್ದೆ ಗೊತ್ತಾ?

ಹಿಮಾಚಲ ಪ್ರದೇಶ:ದೇಶದಲ್ಲಿ ನಿರುದ್ಯೋಗ ತಾಂಡವವಾಗುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ ಇದಾಗಿದ್ದು, ಖಾಲಿ ಇರುವ ಒಂದೇ ಹುದ್ದೆಗೆ ಬರೊಬ್ಬರಿ 22,410 ಅರ್ಜಿಗಳು ಸಲ್ಲಿಕೆ ಆಗಿವೆ.




ಹಿಮಾಚಲ ಪ್ರದೇಶ ಲೋಕಸೇವಾ ಆಯೋಗ (ಎಚ್‌ಪಿಎಸ್‌ಸಿ)ವು ತಾಂತ್ರಿಕ ವಿಶ್ವವಿದ್ಯಾಲಯ ಹಮೀರ್‌ಪುರದಲ್ಲಿ ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಈ ಒಂದು ಹುದ್ದೆಗೆ ಇದುವರೆಗೆ ಸುಮಾರು 22,410 ಅರ್ಜಿಗಳು ಬಂದಿವೆ. ವಿಶೇಷವೆಂದರೆ ಈ ಒಂದು ಹುದ್ದೆಗೆ 10,386 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿದ್ದು, ರೋಲ್ ನಂಬರ್ ಕೂಡ ಕಳುಹಿಸಲಾಗಿದೆ. ಆದರೆ, ಸುಮಾರು 12 ಸಾವಿರ ಅರ್ಜಿದಾರರು ಇನ್ನೂ ಶುಲ್ಕವನ್ನು ಜಮೆ ಮಾಡಿಲ್ಲ. ಅರ್ಜಿದಾರರಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 3ರವರೆಗೆ ಕೊನೆಯ ಅವಕಾಶವಿದೆ.ಒಂದು ವೇಳೆ ಆ ಅಭ್ಯರ್ಥಿಗಳು ಶುಲ್ಕ ಪಾವತಿಸಿದರೆ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿಯಾಗಿದೆ.




ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಗೆ ಈಗಾಗಲೇ 10,386 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿರುವುದರಿಂದ ನೇಮಕಾತಿ ಆಯೋಗವು ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.ಇಷ್ಟೊಂದು ಸಂಖ್ಯೆಯ ಅಭ್ಯರ್ಥಿಗಳು ಇರುವುದರಿಂದ 12,000 ಅಭ್ಯರ್ಥಿಗಳ ಲೆಕ್ಕಾಚಾರದಲ್ಲಿ ರಾಜ್ಯಾದ್ಯಂತ 43 ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.







ಟಾಪ್ ನ್ಯೂಸ್