ಎರಡನೇ ಮದುವೆಯಾಗಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಹಿಸುಕಿ ಕೊಂದ ತಂದೆ; ಹೃದಯವಿದ್ರಾಹಕ ಘಟನೆ‌ ವರದಿ

ಎರಡನೇ ಮದುವೆಯಾಗಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಹಿಸುಕಿ ಕೊಂದ ತಂದೆ; ಹೃದಯವಿದ್ರಾಹಕ ಘಟನೆ‌ ವರದಿ

ಡೆಹ್ರಾಡೂನ್;ಎರಡನೇ ಮದುವೆಯಾಗಲು ಅಡ್ಡಿಯಾಗುತ್ತಾರೆಂದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡದ ಡೆಹ್ರಡೂನಿನ ದೋಯಿವಾಲಾ ಎಂಬ ಪ್ರದೇಶದಲ್ಲಿ ನಡೆದಿದೆ.

ಜಿತೇಂದ್ರ ಎಂಬಾತ ಕೃತ್ಯ ನಡೆಸಿ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳಳು ತಿಳಿಸಿದ್ಧಾರೆ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡೆಹ್ರಡೂನ್ SSP ರಾಕೇಶ್​ ಷಾ, ಜಿತೇಂದ್ರನಿಗೆ ಐದು ವರ್ಷಗಳ ಹಿಂದೆ ರೀನಾ ಎಂಬುವವರ ಜೊತೆ ಮದುವೆಯಾಗಿದ್ದು, ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿಯ ಕಿರುಕುಳ ತಾಳದೆ ಮಕ್ಕಳನ್ನು ಬಿಟ್ಟು ಪತ್ನಿ ಹೈದ್ರಾಬಾದಿಗೆ ತೆರಳಿದವಳು ವಾಪಾಸ್ಸು ಬಂದಿಲ್ಲ.

ಈ‌ ಹಿನ್ನೆಲೆ ‌ಆರೋಪಿಯೂ ಎರಡನೇ ಮದುವೆ ಮಾಡಿಕೊಳ್ಳಲು ಆಲೋಚಿಸಿದ್ದಾನೆ. ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಚಾರ ತಿಳಿದರೆ ಎಲ್ಲಿ ಹೆಣ್ಣು ಕೊಡುವುದಿಲ್ಲ ಎಂದು ಭಾವಿಸಿ ಉಪಾಯ ಮಾಡಿ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ನಿನ್ನೆ ಸಂಜೆ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ, ಮಕ್ಕಳನ್ನು ಭೇಟಿಯಾಗುವ ನೆಪದಲ್ಲಿ ಯಾರು ಇಲ್ಲದ ವೇಳೆ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಜಿತೇಂದ್ರ ಪರಾರಿಯಾಗಿದ್ದಾನೆ.

ಟಾಪ್ ನ್ಯೂಸ್