ಜಾರ್ಖಂಡ್:ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ತಂದೆ ಮತ್ತು ಮಗಳು ಸಜೀವ ದಹನವಾಗಿರುವ ಘಟನೆ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಕಿರಬೂರಿನಲ್ಲಿ ನಡೆದಿದೆ.
ಅಮೀರ್ ಹುಸೇನ್ ಹಾಗೂ ಅವರ 4 ವರ್ಷದ ಮಗಳು ಸಜೀವ ದಹನವಾಗಿದ್ದಾರೆ.
ಸೋಮವಾರ ರಾತ್ರಿ ಮನೆಯೊಳಗೆ ಇಟ್ಟಿದ್ದ ಒಲೆಯಿಂದ ಬಟ್ಟೆಗೆ ಬೆಂಕಿ ತಗುಲಿ ಮನೆಗೆ ಬೆಂಕಿ ಆವರಿಸಿದೆ ಎನ್ನಲಾಗಿದೆ.
ಕಿರಿಬೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡೂ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.