ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪೀಡೆ ತೊಲಗಿದಂತಾಗಿದೆ ಎಂದು ಹೇಳಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತಾನಾಡಿದ ಜಾರಕಿಹೊಳಿ,ಸೋತವರನ್ನು ಪಕ್ಷ ಡಿಸಿಎಂ ಮಾಡಿತ್ತು.ಆದರೆ ಅವನು ಪಕ್ಷ ನಿಷ್ಠೆ ತೋರಿಸಿಲ್ಲ.ಇಂದು ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾರೆ..
ನಾನು ಮತ್ತೆ ಕಾಂಗ್ರೆಸ್ ಹೋಗುತ್ತಾನೆ ಎಂಬ ಯೋಚನೆ ಸವದಿ ತಲೆಯಲ್ಲಿ ಇತ್ತು.ಆದರೆ ನನಗೆ ಮಂತ್ರಿ ಸ್ಥಾನವಿಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೇನೆ, ಉದ್ದ ಅಂಗಿ ಹಾಕಿರುವವನು ಪಕ್ಷದಿಂದ ಹೊರಗೆ ಹೋಗಿರುವುದು ನನಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಒಂದೂವರೆ ವರ್ಷ ಸವದಿ ಮಂತ್ರಿ ಇದ್ದರೂ ಅಥಣಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಲಿಲ್ಲ. ಸವದಿಯನ್ನು ವಿಶೇಷ ವಿಮಾನದಲ್ಲಿ ಡಿಕೆಶಿ ಕರೆದುಕೊಂಡು ಹೋಗಿದ್ದಾನೆ.ಮಹೇಶ್ ಕುಮಠಳ್ಳಿ ಅವರನ್ನು ಕ್ಷೇತ್ರದ ಜನರು ಗೆಲ್ಲಿಸಬೇಕು.ಲಕ್ಷ್ಮಣ ಸವದಿ ಸೋಲಬೇಕು.ನಾನು ಅಥಣಿಯಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.
ನೀವು ನನಗೆ ಶಕ್ತಿ ಆಗಬೇಕು.ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರದ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ದಬ್ಬಾಳಿಕೆಗೆ ಹೆದರಬೇಡಿ.ಅಥಣಿ ಕ್ಷೇತ್ರದಲ್ಲಿ ನಾನು ಬರುತ್ತೇನೆ.ಇಷ್ಟು ದಿನ ಲಕ್ಷ್ಮಣ ಸವದಿ ನಮ್ಮ ಪಕ್ಷದಲ್ಲಿ ಇದ್ದರು ಎಂದು ನಾನು ಸುಮ್ಮನೆ ಇದ್ದೆ.ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.